ಚೊಳೆ ಮೀನು-
ಸೈಪ್ರಿನಿಫಾರ್ಮೀಸ್ ಗಣದ ಸೈಪ್ರಿನಿಡೆ ಕುಟುಂಬಕ್ಕೆ ಸೇರಿದ ಒಂದು ಆಹಾರ ಮೀನು. ಚೆತ್ತೆಮೀನು, ಪರ್ಯಾಯನಾಮ. ಚೇಲ ಅತ್ಪ (ಚೇಲ ಹೋರೈ) ಶಾಸ್ತ್ರಿಯ ಹೆಸರು. ಭಾರತದ ನದಿಗಳಲ್ಲಿ ಕಾಣಸಿಗುತ್ತದೆ. ಉದ್ದ ಸುಮಾರು 9"; ಬಣ್ಣ ಬಿಳಿ. ನದಿ, ಕೆರೆ ಮುಂತಾದೆಡೆ ಕಂಡುಬರುವ ಕೀಟ ಮತ್ತು ಸೊಳ್ಳೆಗಳ ಡಿಂಬಗಳನ್ನು ತಿಂದು ಬದುಕುತ್ತದೆ. ಇದರಿಂದ ಇದು ಒಳ್ಳೆಯ ಡಿಂಬನಾಶಕವೆಂದು ಹೆಸರಾಗಿದೆ. ಸಂತಾನೋತ್ಪತ್ತಿಯ ಸಮಯ ಮುಂಗಾರು ಮಳೆಗಾಲ.
(ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ